ಶಿವಮೊಗ್ಗ: ಗರ್ಭಿಣಿಯರು ಕ್ಯೂನಲ್ಲಿ ನಿಂತು ಮಾತ್ರೆ ಖರೀದಿ ಮಾಡುತ್ತಿರುವುದು ಮನಕಲುಕುವಂತಿತ್ತು: ನಗರದಲ್ಲಿ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ
ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ನಲ್ಲಿ ತುಂಬಾ ಗರ್ಭಿಣಿಯರು ಕ್ಯೂನಲ್ಲಿ ನಿಂತು ಮಾತ್ರೆ ಖರೀದಿ ಮಾಡುತ್ತಿರುವುದು ಮನೆತನಕುವಂತಿತ್ತು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಬೇಸರ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು ಕೌಂಟರ್ ಗಳನ್ನು ಹೆಚ್ಚು ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.