ಕುಡಿಯುವ ನೀರಿನ ಕಾಮಗಾರಿಯ ಸಾಮಗ್ರಿಗಳ ಬಿಲ್ ಪಾವತಿ ಮಾಡದ ಹಿನ್ನೆಲೆ ರಾಯಚೂರಿನ ಮಾನ್ವಿ ತಾಲೂಕು ಪಂಚಾಯತಿ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉಟಕನೂರು ಗ್ರಾಮ ಪಂಚಾಯತಿಯ ಕಾಮಗಾರಿ ಸಾಮಗ್ರಿ ಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ನ್ಯಾಯಾಲಯ ಆದೇಶದಂತೆ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಮಾನ್ವಿಯ ಪೊತ್ನಾಳದ ಬಾಲಾಜಿ ಹಾರ್ಡ್ವೇ್ರ ಅಂಗಡಿ ಮಾಲೀಕ ರಾಮಕೃಷ್ಣ ಅಧಿಕಾರಿಗಳು ಬಿಲ್ ನೀಡದೆ ಸತಾಯಿಸುತ್ತಿದ್ದು 6 ಲಕ್ಷ 2 ಸಾವಿರ ಹಣ ಬಾಕಿ ಹಿನ್ನೆಲೆ ನ್ಯಾಯಾಲಯ ನ್ಯಾಯಾಲಯ ಆದೇಶ ನೀಡಿತ್ತು.