ರಾಯಚೂರು: ಅಂತರ್ ರಾಜ್ಯ ಕಳ್ಳರ ಬಂಧನ 18 ಪಂಪ್ಸೆಟ್ ಒಂದು ಕಾರು ಜಪ್ತಿ : ಎಸ್ಪಿ
ಪಂಪ್ಸೆಟ್ ಮೆಕಾನಿಕ್ ಗಳೇ ರೈತರ ಪಂಪ್ಸೆಟ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ 18 ಪಂಪ್ಸೆಟ್ ಮತ್ತು ಒಂದು ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ರಾಯಚೂರು ಎಸ್ಪಿ ಪುಟ್ಟಮಾದಯ್ಯ ಅವರು ಮಾಹಿತಿ ನೀಡಿದರು. ಇಬ್ಬರೂ ಕಳ್ಳರಿಂದ 4 ಲಕ್ಷದ 31 ಸಾವಿರ ಬೆಲೆಬಾಳವ, 18 ಪಂಪ್ಸೆಟ್ ಗಳನ್ನು ವಶಪಡಿಸಿಕೊಂಡಿದ್ದು, ಜೊತೆಗೆ ಕಳ್ಳತನಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಎಂಟು ಪಪ್ಸೆಟ್ ಮತ್ತು ತೆಲಂಗಾಣದ ಕೃಷ್ಣ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ 10 ಪಂಪ್ಸೆಟ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.