ಬೆಂಗಳೂರು ಉತ್ತರ: ಮೇಖ್ರಿ ಸರ್ಕಲ್‌ನಿಂದ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ವರೆಗೂ 'ಮಿಷನ್ ಕ್ಲೀನ್ ಏರ್‌ಪೋರ್ಟ್ ರೋಡ್' ಅಭಿಯಾನ
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ 'ಮಿಷನ್ ಕ್ಲೀನ್ ಏರ್‌ಪೋರ್ಟ್ ರೋಡ್' ಹೆಸರಿನ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 21ರಂದು ಬೆಳಿಗ್ಗೆ 6 ಗಂಟೆಗೆ ಮೇಖ್ರಿ ಸರ್ಕಲ್‌ನಿಂದ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ವರೆಗಿನ 34 ಕಿಲೋಮೀಟರ್ ಮಾರ್ಗದ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಭಾಗವಾಗಿ ಮಿಶ್ರ ಕಸ, ಪ್ಲಾಸ್ಟಿಕ್ ಮತ್ತು ಕಟ್ಟಡ ಭಗ್ನಾವಶೇಷಗಳ ತ್ಯಾಜ್ಯವನ್ನು ಸರ್ವಿಸ್ ರಸ್ತೆಗಳಿಂದ ತೆರವುಗೊಳಿಸಲಾಯಿತು.