ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಗುರುವಾರ ವಿಧಾನಸೌಧಕ್ಕೆ ಆಗಮಿಸಿದ ಗಿಲ್ಲಿ ನಟ, ಸಿಎಂ ಅವರನ್ನು ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇದೇ ವೇಳೆ ಸಿಎಂ ಅವರಿಗೆ ಹಾಕಿ ಸನ್ಮಾನಿಸಲು ತಂದಿದ್ದ ಹಾರವನ್ನು, ಸ್ವತಃ ಸಿಎಂ ಅದೇ ಹಾರವನ್ನು ಗಿಲ್ಲಿಗೆ ಹಾಕಿ ಅಭಿನಂದಿಸಿದರು. ಗಿಲ್ಲಿ ಅವರ ಅಪ್ಪ ಅಮ್ಮನ ಬಗ್ಗೆಯೂ ಕೇಳಿದ ಸಿಎಂ, ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.