ಲಿಂಗಸೂರು: ಆರೋಪಿ ಪರ ವಹಿಸಿದ ಮುದಗಲ್ ಪೊಲೀಸ್ ಅಮಾನತಿಗೆ ಒತ್ತಾಯ
ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ಹಿನ್ನೆಲೆ, ಪೊಲೀಸ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಮಲ್ಲಪ್ಪ ಚೌಹಾಣ್ ಸಹೋದರಿ ಶಿಲ್ಪ ಮುದುಗಲ್ ಪಿಎಸ್ಐ ವೆಂಕಟೇಶ ಅವರನ್ನು ಅಮಾನತ್ತು ಮಾಡಲು ಒತ್ತಾಯಿಸುತ್ತಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ಜಗಳವಾಗಿತ್ತು. ಆರೋಪಿಪರಾಣಿತ ಪೊಲೀಸರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನ ಮಾಡಿದ್ದಾರೆ ಪೊಲೀಸರು ಹಲ್ಲೆ ಮಾಡಲು ಬಂದ ವೇಳೆ ವಿಡಿಯೋ ಮಾಡುತ್ತಿದ್ದಾಗ ನಮ್ಮ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಮೊಬೈಲ್ ತೋರಿಸಿ ಅಸಮಾಧಾನ ಹೊರಹಾಕಿದ್ದಾರೆ.