ಅತ್ಯಂತ ಕುತೂಹಲ ಮೂಡಿಸಿರುವ ಚುನಾವಣೆ ಕ್ಷೇತ್ರವಾಗಿರುವ ತೀರ್ಥಹಳ್ಳಿಯಲ್ಲಿ ತ್ರಿಮೂರ್ತಿಗಳ ರಾಜಕಾರಣ ರಣರಂಗ ಆಗಿದ್ದು ಈಗ ಈ ವಿಚಾರಕ್ಕೆ ಶಾಸಕ ಆರಗ ಜ್ಞಾನೇಂದ್ರ ಅವರು ಸಂಚಲನದ ಹೇಳಿಕೆ ನೀಡಿದ್ದು ಪತ್ರಕರ್ತರು ಸೇರಿ ಹಲವರು ಹಾಸ್ಯ ಚಟಾಕಿ ಹಾರಿಸಿದರು. ತೀರ್ಥಹಳ್ಳಿಯಲ್ಲಿ ಶನಿವಾರ ಜಾತ್ರಾ ಸಂದರ್ಭದಲ್ಲಿ ಜಾತ್ರಾ ಸಮಿತಿ ವತಿಯಿಂದ ಗೌರವ ಅಧ್ಯಕ್ಷರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ ಅವರಿಗೆ ಗೌರವ ಸನ್ಮಾನ ಮಾಡುವುದಾಗಿ ಹೇಳುತ್ತಿದ್ದಂತೆ ನಮಗೆಲ್ಲ ಬೇಡ ನಾವು ರಾಜಕೀಯ ನಿವೃತ್ತಿ ಹೊಂದುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.