ಕೋಲಾರ: ನಗರದಲ್ಲಿ ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ
Kolar, Kolar | Aug 13, 2025 ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯು ಕೋಲಾರ ನಗರದಲ್ಲಿ ಬುಧವಾರ ಮಧ್ಯಾಹ್ನ 3: 30ರ ಸಮಯದಲ್ಲಿ ವಿಜೃಂಭಣೆಯಿಂದ ನಡೆಯಿತು.ರಥವು ಕೋಲಾರದ ವಾಲ್ಮೀಕಿ ವೃತ್ತದಿಂದ ಪೂರ್ಣಕುಂಭ ಕಳಸ ವೇದಘೋಷ, ಮಂಗಳವಾದ್ಯ, ಕೇರಳ ಚಂಡೆ, ಭಜನೆಯೊಂದಿಗೆ ಎಂಜಿ ರಸ್ತೆ ಮೂಲಕ ಎಸ್. ಎನ್.ಆರ್.ಮುಂಭಾಗದ ಶ್ರೀ ಸಾಯಿ ಮಂದಿರಕ್ಕೆ ತೆರಳಿತು ಅಲ್ಲಿ ಪಾದುಕಾ ದರ್ಶನವನ್ನು ನಡೆದಿದ್ದ ಸಹಸ್ರಾರು ಭಕ್ತರು ಪಡೆದರು ಇದೇ ವೇಳೆ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.