ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ನಂಬರ್ ಕೊಡಿ, ಮೂರು ತಿಂಗಳಿಂದ ಗೃಹ ಲಕ್ಷ್ಮಿ ಹಣ ಬಂದಿಲ್ಲ: ಹಂಪಯ್ಯನ ಮಾಳಿಗೆ ಮಹಿಳೆ ವಿಡಿಯೋ ವೈರಲ್
ಕಳೆದ ಮೂರ್ನಾಲ್ಕು ತಿಂಗಳಿಂದ ಗೃಹ ಲಕ್ಷ್ಮೀ ಹಣ ಬಂದಿಲ್ಲ. ಸಿದ್ರಾಮಣ್ಣನ ನಂಬರ್ ಕೊಡು, ಯಾಕೆ ಗೃಹಲಕ್ಷ್ಮೀ ಹಣ ಹಾಕಲ್ಲ ಅಂತಾ ಕೇಳ್ತೀನಿ ಅಂತಾ ಸುದ್ದಿಗೆ ತೆರಳಿದ ರಿಪೋರ್ಟರ್ ಗೆ ಕೂಲಿ ಕಾರ್ಮಿಕ ಮಹಿಳೆ ಕೇಳಿದ್ದಾಳೆ. ಚಿತ್ರದುರ್ಗ ತಾಲೂಕಿನ ಹಂಪಯ್ಯನಮಾಳಿಗೆ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಸುದ್ದಿಗೆ ಹೋಗಿದ್ದ ವರದಿಗಾರನಿಗೆ ಈ ರೀತಿ ಪ್ರಶ್ನೆ ಮಾಡಿ ಅಚ್ಚರಿ ಮೂಡಿಸಿದ್ದಾಳೆ. ಹೆಣ್ಣುಮಕ್ಕಳು ಸಿದ್ರಾಮಣ್ಣನಿಗೆ ದುಡ್ಡು ಹಾಕು, ಬಸ್ ಫ್ರೀ ಮಾಡು ಅಂದಿದ್ರಾ. ಯಾಕಣ್ಣ ದುಡ್ಡು ಹಾಕ್ತೀನಿ ಅಂತಾ ಆಸೆ ತೋರಸ್ಬೇಕು. ಬಸ್ ಫ್ರೀ ಶಾಲಾ ಕಾಲೇಜು ಮಕ್ಕಳಿಗೆ ಕೊಟ್ರೆ ಓದಿ ವಿದ್ಯಾವಂತರಾಗ್ತಾರೆ. ನಮಗೆ ಫ್ರೀ ಕೊಟ್ರೆ ಕೂಲಿ ಕೆಲಸ ಬಿಟ್ಟು ಊರೂರು ಸುತ್ತೋಕಾಗುತ್ತಾ.