ಹಾವೇರಿ ಜಿಲ್ಲೆ ಬ್ಯಾಡಗಿ ನಗರದ ಹೊರಭಾಗದಲ್ಲಿ ಶಿಡೇನೂರು ಮಟ್ಟಿಯಲ್ಲಿರುವ ಸೀತಾಸತಿ, ಡಾಕು ಮಹಾರಾಜರ ದೇವಸ್ಥಾನಕ್ಕೆ ಶಾಸಕ ಬಸವರಾಜ ಶಿವಣ್ಣವರ ಭೇಟಿ ನೀಡಿದರು. ಯುಗಾದಿ ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನಾಶಿರ್ವಾದ ಪಡೆದುಕೊಂಡರು. ಇದೆ ವೇಳೆ ದೇವಸ್ಥಾನದ ಅಭಿವೃದ್ಧಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯರು ಶಾಸಕ ಬಸವರಾಜ ಶಿವಣ್ಣನರ ಅವರಿಗೆ ಮನವಿ ಮಾಡಿದರು. ಸ್ಥಳೀಯರ ಮನವಿಗೆ ಸ್ಪಂಧಿಸಿದ ಶಾಸಕ ಬಸವರಾಜ ಶಿವಣ್ಣನವರ ಅವರು, ದೇವಸ್ಥಾನದ ಅಭಿವೃದ್ಧಿ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಹೇಳಿದ್ದಾರೆ