ಹೊಳಲ್ಕೆರೆ: ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನದ ಪಕ್ಕದ ಬೋರ್ ವೆಲ್ ದುರಸ್ತಿಗೆ ಸ್ಥಳೀಯರು ಆಗ್ರಹ
ಹೊಳಲ್ಕೆರೆ ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನದ ಪಕ್ಕದ ಬೋರ್ ವೆಲ್ ಕೆಟ್ಟು ಮೋಟರ್ ಸಿಕ್ಕಿ ಹಾಕಿಕೊಂಡಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಹೊಳಲ್ಕೆರೆ ವಾರ್ಡ್ ನಂಬರ್ 1 ರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಪಕ್ಕದ ಬೋರ್ ವೆಲ್ ಕೆಟ್ಟು ಮೋಟರ್ ಸಿಕ್ಕಿ ಹಾಕಿಕೊಂಡು 10 ದಿನಗಳು ಕಳೆದರೂ ಪುರಸಭಾ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಹಾಗೂ ಪುರಸಭಾ ಉಪಾಧ್ಯಕ್ಷರಾದ ನಾಗರತ್ನ ವೇದಮೂರ್ತಿಯವರು ಮೋಟರ್ ಎತ್ತಿಸದೆ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ