ಶ್ರೀರಂಗಪಟ್ಟಣತಾಲ್ಲೂಕಿನ ಬೆಳಗೊಳದಲ್ಲಿರುವ ಸರ್ವಧರ್ಮ ಆಶ್ರಮದ ಮಹಿಳಾ ಭಕ್ತರ ಮೇಲೆ ದೌರ್ಜನ್ಯ ತಾಲ್ಲೂಕಿನ ಬೆಳಗೊಳದಲ್ಲಿರುವ ಸರ್ವಧರ್ಮ ಆಶ್ರಮದಲ್ಲಿ ಪೀಠಾಧಿಪತಿ ಹಾಗೂ ಸಿಬ್ಬಂದಿ, ಮಹಿಳಾ ಭಕ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ. ಆಶ್ರಮದ ಈ ಹಿಂದಿನ ಟ್ರಸ್ಟಿಯಾಗಿದ್ದ ಕಬೀರ್ ಕಿರಣ್ ಬೆಂಬಲಿಗರಾದ ಕೇಶವ ರಾಯಡು ಸೇರಿ ಹಲವರು ಪ್ರಸ್ತುತ ಮಠದ ಪೀಠಾಧ್ಯಕ್ಷೆ ಮಮತಮ್ಮ ಹಾಗೂ ಬೆಂಬಲಿಗರನ್ನು ಹೊರ ಹಾಕಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಾಯಾದಿಗಳ ಕಲಹದಿಂದ ಭಂಭಂ ಆಶ್ರಮದ ಸಿಬ್ಬಂದಿ ಬೀದಿಗೆ ಬಂದಿದ್ದು, ಆಶ್ರಮದ ಹೊರಗೆ ಕುಳಿತು ಮಹಿಳಾ ಭಕ್ತರು ಕಣ್ಣೀರಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.