ಮುಧೋಳ: ರೈತರ ಮೇಲೆ ಎಫ್.ಐ.ಆರ್. ಹಿನ್ನಲೆ, ನಗರದಲ್ಲಿ ರೈತ ಸಂಘದಿಂದ ಸಭೆ,ಹೋರಾಟದ ಬಗ್ಗೆ ಚರ್ಚೆ
ರೈತ ಮುಖಂಡರ ಮೇಲೆ ಪೊಲೀಸರು ಎಪ್.ಐ.ಆರ್ ದಾಖಲಿಸಿರುವ ಹಿನ್ನಲೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಅವರ ನೇತೃತ್ವದಲ್ಲಿ ರೈತರಸಭೆ ನಡೆಸಲಾಯಿತು. ಮುಧೋಳ ನಗರದಲ್ಲಿ ಸಭೆ ನಡೆಸಿದ ರೈತರು ಸರ್ಕಾರ ,ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ರೈತ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಹೋರಾಟವನ್ನಜ ಹತ್ತಿಕ್ಕುವ ತಂತ್ರ ನಡೆಯುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.