ಶುಕ್ರವಾರ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ನಟ ಗಿಲ್ಲಿ ನಟರಾಜ್, ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನ ಸದಾಶಿವನಗರದ ಮನೆಗೆ ತೆರಳಿದ ಗಿಲ್ಲಿ ನಟ, ಗೃಹಸಚಿವರನ್ನು ಭೇಟಿಯಾಗಿ, ಅವರ ಜೊತೆಗೆ ಟೀ ಸವಿದು ಒಂದಷ್ಟು ಹೊತ್ತು ಅವರ ಜೊತೆಗೆ ಕಾಲ ಕಳೆದು ಬಂದರು. ಬಿಗ್‌ಬಾಸ್‌ನಿಂದ ಆಚೆ ಬಂದ ಮೇಲೆ ಹೊರಗೆ ಸಿಕ್ಕ ಪ್ರೀತಿ, ಅಷ್ಟೊಂದು ಜನರನ್ನು ನೋಡಿ ಅರೇ ಕ್ಷಣ ನಿಬ್ಬೆರಗಾದೆ ಎಂದು ಜೀ ಪರಮೇಶ್ವರ್ ಮುಂದೆ ಹೇಳಿಕೊಂಡಿದ್ದಾರೆ. ಬಳಿಕ, ಮನರಂಜನೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡು, ನಿನ್ನ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಗೃಹಸಚಿವರು ಹರಸಿದರು.