ಕೆರೆ ನೀರು ಉಳಿವಿಗಾಗಿ ರೈತರಿಂದ ಪಂಜಿನ ಮೆರವಣಿಗೆ ನಡೆಸಿರುವ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಮಾನಿ ಕೆರೆ ನೀರನ್ನ ಉಳಿಸಲು ನಿರಂತ ಹೋರಾಟ ಮಾಡುತ್ತಿರುವ ರೈತರು ಇಂದು ಒಂಜಿನ ಮೆರವಣಿಗೆ ನಡೆಸುವುದರ ಮೂಲಕ ಶಾಸಕರ ನಡತೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ವಾಟದಹೊಸಹಳ್ಳಿ ಗ್ರಾಮದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕೆರೆಯ ವರೆಗೂ ಪಂಜುಗಳನ್ನ ಹಿಡಿದು ಪಾದಯಾತ್ರೆ ನಡೆಸಿದ್ದಾರೆ.