ಬೀದರ್: ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ, ನಗರದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ
Bidar, Bidar | Mar 5, 2024 ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ ಮಾಡಿದ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ನಗರದ ಮೊಹನ್ ಮಾರ್ಕೆಟ್ ಬಳಿ ಅಂಗಡಿ ಮುಂಗಟ್ಟುಗಳಲ್ಲಿ ಹಾಕಲಾದ ಆಂಗ್ಲ ಭಾಷೆಯ ನಾಮಫಲಕವನ್ನು ಕಾರ್ಯಕರ್ತರು ಧ್ವಂಸಗೊಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್, ಕಲ್ಯಾಣ ಕರ್ನಾಟಕ ಮುಖಂಡ ಜಗದೀಶ್ ಹಾಜರಿದ್ದರು.