ಕಂಪ್ಲಿ: ನಗರದಲ್ಲಿ ಕನಕದಾಸರ ಜಯಂತಿ ಭವ್ಯ ಮೆರವಣಿಗೆ, ಕುಣಿದು ಕುಪ್ಪಳಿಸಿದ ಯುವಕರು
Kampli, Ballari | Nov 16, 2025 ನ.16, ಭಾನುವಾರ ಮಧ್ಯಾಹ್ನ 12ಗಂಟೆಗೆ ಕನಕದಾಸರ ಜಯಂತಿ ಅಂಗವಾಗಿ ನಗರದ ಸಾಂಗತ್ರಾಯ ಪಾಠಶಾಲೆಯಿಂದ ಕನಕದಾಸರ ಭಾವಚಿತ್ರವನ್ನು ಭಕ್ತಿಪೂರ್ವಕವಾಗಿ ತೂಗಿಸಿಕೊಂಡು ಮುಖ್ಯ ಬೀದಿಗಳ ಮೂಲಕ ಅಂಬೇಡ್ಕರ್ ಸರ್ಕಲ್ವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯುವಕರು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಿಶೇಷವಾಗಿ ಡೊಳ್ಳು ಕುಣಿತ ತಂಡದ ಪ್ರದರ್ಶನ ನಾಗರಿಕರ ಗಮನ ಸೆಳೆದು ಮೆರವಣಿಗೆಗೆ ಮತ್ತಷ್ಟು ಸೊಬಗು ತುಂಬಿತು. ನಗರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಮೆರವಣಿಗೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.