ಮಳವಳ್ಳಿ: ತಾಲ್ಲೂಕಿನ ಬೆಳಕವಾಡಿಯಲ್ಲಿ ನಡೆದ ಹಿರಿಯ ನಾಗರೀಕರ ದಿನಾಚರಣೆ, ಹಿರಿಯರ ಕಡೆಗಣನೆ ವಿಚ್ಚೇದನ ಹೆಚ್ಚಳ ಎಂದ ನ್ಯಾಯಾಧೀಶರು
ಮಳವಳ್ಳಿ ; ಅವಿಭಕ್ತ ಕುಟುಂಬ ಗಳು ಇಲ್ಲದಿರುವುದರಿಂದ ಹಿರಿಯ ನಾಗರಿಕರನ್ನು ಕಡೆಗಣಿಸಲಾಗುತ್ತಿದೆ ಎಂದು ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಮಹೇಂದ್ರ ವಿಷಾಧ ವ್ಯಕ್ತಪಡಿಸಿ ದ್ದಾರೆ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮಳವಳ್ಳಿ, ವಕೀಲರ ಸಂಘ ಮಳವಳ್ಳಿ ಹಾಗೂ ಬೆಳಕವಾಡಿ ಪೊಲೀಸ್ ಠಾಣೆ ಸಹ ಯೋಗದೊಂದಿಗೆ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು ಅವಿಭಕ್ತ ಕುಟುಂಬದಲ್ಲಿ ಹಿರಿಯರಿದ್ದಾಗ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆ ಇತ್ತು ಎಂದರು.