ಸಿದ್ಧಾಪುರ: ಪಟ್ಟಣ ಪಂಚಾಯತ ವ್ಯಾಪ್ತಿಯ ಹೊಸಪೇಟೆ ಸೇರಿದಂತೆ ವಿವಿಧೆಡೆ ಶಾಸಕ ಭೀಮಣ್ಣ ಭೇಟಿ : ಮೂಲಭೂತ ಸೌಕರ್ಯಗಳ ಚರ್ಚೆ
ಸಿದ್ದಾಪುರ : ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಅಗತ್ಯತೆ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿದರು. ಹೊಸಪೇಟೆ ಕೊಂಡಲಿ ಬೈಲು ರಸ್ತೆ, ಕನಕದಾಸ ಗಲ್ಲಿ, ಎಲ್.ಬಿ. ನಗರ, ಕೆರೆಗುಡ್ಡೆ ಕೇರಿ, ಹೊಸೂರು, ಸಂಪೆಕೇರಿ, ಹಣಜಿಬೈಲು, ನಾಗರಕಟ್ಟೆ, ಹಾಳದಕಟ್ಟಾ ಮತ್ತು ಕೊಪ್ಪ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಮೂಲಭೂತ ಸೌಕರ್ಯಗಳ ಸ್ಥಿತಿಗತಿಯನ್ನು ಗಮನಿಸಿ ಅಗತ್ಯ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು. ಸ್ಥಳೀಯ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.