ಚಿತ್ರದುರ್ಗ: ಶಿಥಿಲಾವಸ್ಥೆಗೆ ತಲುಪಿದೆ ವೆಂಕಟೇಶ್ವರ ಬಡಾವಣೆ ಸರ್ಕಾರಿ ಶಾಲೆ: ಜೀವ ಭಯದಲ್ಲಿ ಪಾಠ ಕೇಳುವ ಮಕ್ಕಳು
ಚಿತ್ರದುರ್ಗ ಹೊರವಲಯದ ವೆಂಕಟೇಶ್ವರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1994 ರಲ್ಲಿ ಆರಂಭವಾಗಿರೋ ಈ ಶಾಲೆ. ಕಳೆದ ಐದಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ನರಳುತ್ತಿದೆ. ಕನ್ನಡ ಶಾಲೆ ಜೊತೆ ಇದೇ ಆವರಣದಲ್ಲಿ ಉರ್ದು ಶಾಲೆ ಕೂಡಾ ಆರಂಭವಾಗಿದ್ದು, ಅವಳಿ ಶಾಲೆ ಮಕ್ಕಳು ಜೀವ ಕೈಯಲ್ಲಿಡಿದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಶಾಲೆಯಲ್ಲಿ 1 ರಿಂದ 7 ನೇ ತರಗತಿ ವರೆಗೂ ಒಟ್ಟು 93 ಮಕ್ಕಳು ಓದುತ್ತಿದ್ದು, ಇವರಿಗೆ 4 ಕೊಠಡಿ ಮಾತ್ರ ಲಭ್ಯವಿದೆ. ಅದ್ರಲ್ಲಿ ಎರಡು ಕ್ಲಾಸ್ ರೂಂಗಳು ಶಿಥಿಲಾವಸ್ಥೆಗೆ ತಲುಪಿದ್ದು, ಬೀಳುವ ಹಂತಕ್ಕೆ ಬಂದು ನಿಂತಿವೆ. ಮೇಲ್ಚಾವಣಿಯ ಹೆಂಚುಗಳು ಕೂಡಾ ಹೊಡೆದು ಚೂರಾಗಿದ್ದು, ಗೋಡೆಗಳು ಕೂಡಾ ಬಾಯ್ತೆರೆದು ನಿಂತಿವೆ.