ಮೊಳಕಾಲ್ಮುರು: ಪಟ್ಟಣದ ಪೊಲೀಸ್ ಠಾಣೆಯಿಂದ ದಂಡದ ಬದಲಿಗೆ ಬೈಕ್ ಸವಾರರಿಗೆ ಹೆಲ್ಮೆಟ್ ನೀಡುವ ವಿನೂತನ ಕಾರ್ಯಕ್ರಮ
ಮೊಳಕಾಲ್ಮುರು:-ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವವರಿಗೆ ದಂಡದ ಬದಲು ಹೆಲ್ಮೇಟ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಗುರುವಾರದಂದು ಸ್ಥಳೀಯ ಪೊಲೀಸ್ ಠಾಣೆಯಿಂದ ಚಾಲನೆ ನೀಡಲಾಗಿದೆ. ದ್ವಿಚಕ್ರ ವಾಹನಗಳ ಅಪಘಾತದ ವೇಳೆ ಹೆಚ್ಚು ಸಾವಾಗಿರುವುದು ಹೆಲ್ಮೆಟ್ ಧರಿಸದೇ ಇರುವ ಸವಾರರದ್ದು.ಈಗಾಗಲೇ ಅನೇಕ ಕಡೆ ಹೆಲ್ಮೆಟ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.ಸಾಕಷ್ಟು ಬಾರಿ ವಿನಮ್ರವಾಗಿ ಹೇಳಿ ದಂಡ ಕೂಡ ಹಾಕಿದ್ದೇವೆ ಆದರೂ, ಹೆಲ್ಮೆಟ್ ಇಲ್ಲದೆ ಬೇಜವಾಬ್ದಾರಿಯಿಂದ ಸವಾರರು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ದಂಡದ ಬದಲಿಗೆ ಹೆಲ್ಮೆಟ್ ನೀಡಲಾಗುತ್ತಿದೆ ಎಂದರು.