ಹಿರಿಯೂರು: ಹಿಂಡಸ್ ಕಟ್ಟೆ ಬಳಿ ಲಾರಿ ಹರಿದು 18 ಕುರಿಗಳು ಸಾವು
ಹಿಂಡಸ್ ಕಟ್ಟೆ ಬಳಿ ಲಾರಿ ಹರಿದು 18 ಕುರಿಗಳು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ 4 ಗಂಟೆಗೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹಿಂಡಸ್ ಕಟ್ಟೆ ಬಳಿ ಘಟನೆ ನಡೆದಿದೆ. ಕುರಿ ಮೇಯಿಸಲು ಹೋಗಿ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ಬಾಲದೇವರಹಟ್ಟಿ ಚಿತ್ತಪ್ಪ, ಚಂದ್ರಪ್ಪ ಅವರಿಗೆ ಸೇರಿದ ಕುರಿಗಳು ಎನ್ನಲಾಗಿದೆ. ಪಿಲಾಜನಹಳ್ಳಿಯಿಂದ ಬಾಲದೇವರಹಟ್ಟಿ ಕಡೆ ಬರುತ್ತಿದ್ದಾಗ ಅಪಘಾತ ಜರುಗಿದೆ. ಲಾರಿ ಚಾಲಕನ ಅತಿವೇಗ & ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಸಮೇತ ಚಾಲಕ ಕಾಲ್ಕಿತ್ತಿದ್ದಾನೆ. 2 ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪಿಐ ಆನಂದ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.