ಗಂಗಾವತಿ: 5 ದಿನ ಕಳೆದ್ರೂ ಪತ್ತೆಯಾಗದ ಮಗು ಅಜಾನ್, ಹಳ್ಳದಲ್ಲಿ ಹುಡುಕಾಟ ನಡೆಸಿರೋ ಸಿಬ್ಬಂದಿ...!
ಗಂಗಾವತಿಯ ಮೊಹಮ್ಮದ್ ನಗರದ ದುರ್ಗಮ್ಮನ ಹಳ್ಳದಲ್ಲಿ ನಾಲ್ಕು ವರ್ಷದ ಮಗು ಅಜಾನ್ ನಾಪತ್ತೆಯಾಗಿ ಐದು ದಿನ ಕಳೆದರೂ ಇದುವರೆಗೂ ಮಗುವಿನ ಗುರುತು ಪತ್ತೆಯಾಗಿಲ್ಲ. ಕಳೆದ ತಿಂಗಳ 27ರಂದು ನಾಲ್ಕು ವರ್ಷದ ಮಗು ಅಜಾನ್ ಹಳ್ಳದಲ್ಲಿ ಬಿದ್ದು ನಾಪತ್ತೆಯಾಗಿದ್ದ. ಸದ್ಯ ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಐದು ದಿನಗಳಿಂದ ನಿರಂತರವಾಗಿ ಮಗುವಿಗಾಗಿ ಹುಡುಕಾಟ ನಡೆಸಿದ್ದು ಯಾವುದೇ ಗುರುತು ಪತ್ತೆಯಾಗಿಲ್ಲ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದು ಐದು ದಿನಗಳು ಕಳೆದಿವೆ...