ಚಳ್ಳಕೆರೆ: ನಿವೇಶನಕ್ಕೆ ಒತ್ತಾಯಿಸಿ ಗೋಸಿಕೆರೆ ಗ್ರಾಮಸ್ಥರಿಂದ ಚಳ್ಳಕೆರೆ ಇಓ ಕಚೇರಿ ಬಳಿ ಉಪವಾಸ ಸತ್ಯಾಗ್ರಹ
ಚಳ್ಳಕೆರೆ ನಗರದ ಇಓ ಕಚೇರಿ ಮುಂಭಾಗ ಕಳೆದ 15 ದಿನಗಳಿಂದ ಗೋಸಿಕೆರೆ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನಿವೇಶನಕ್ಕೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಈ ನಡುವೆ ನ.18 ಬೆಳಿಗ್ಗೆ 10 ಗಂಟೆಗೆ ಉಪವಾಸ ಸತ್ಯಾಗ್ರಹ ನಡೆಸಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ. ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದಲ್ಲಿ, ಸರಕಾರಿ ಜಮೀನಲ್ಲಿ ನಿವೇಶನಕ್ಕೆ ದಲಿತ ಕುಟುಂಬಗಳ ಆಗ್ರಹಿಸುತ್ತಿವೆ. ಶಾಸಕರು, ಜಿಲ್ಲಾಡಳಿತ, ತಹಶೀಲ್ದಾರ್ ಬಂದ್ರೂ ಸಮಸ್ಯೆ ಇದುವರೆಗೂ ಕೂಡಾ ಬಗೆಹರಿದಿಲ್ಲ. ನಮಗೆ ಹಕ್ಕುಪತ್ರ ಕೊಡದಿದ್ರೆ ನಾವು ಉಪವಾಸ ಸತ್ಯಾಗ್ರಹ ಮಾಡ್ತೀವಿ, ಅಂತ ಜಿಲ್ಲಾಡಳಿತದ ವಿರುದ್ಧ 75ಕ್ಕೂ ಹೆಚ್ಚು ದಲಿತ ಕುಟುಂಬಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.