ಯಡ್ರಾಮಿ ತಾಲೂಕಿನ ಇಜೇರಿ ಸಾಥಖೇಡ ನೇರಡಗಿ ಬಿಳವಾರ ಬಳಬಟ್ಟಿ ಮಾರ್ಗದ ರಸ್ತೆ ಸಂಪೂರ್ಣ ತಗ್ಗು ಗುಂಡುಗಳಿಂದ ತುಂಬಿ ವಾಹನ ಸವಾರರಿಗೆ ನಿತ್ಯ ತೊಂದರೆ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಬ್ಯಾಲೆನ್ಸ್ ತಪ್ಪಿ ಅಪಘಾತ ಸಂಭವಿಸುತ್ತಿವೆ. ಹಲವು ಹಳ್ಳಿಗಳನ್ನು ಸಂಪರ್ಕಿಸುವ ಮಹತ್ವದ ಮಾರ್ಗವಾಗಿರುವುದರಿಂದ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸಲು ಜನರು ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿ ನಡೆಸಿದ ಗುತ್ತೇದಾರರ ವಿರುದ್ಧ ಕ್ರಮ ತೆಗೆದುಕೊಂಡು, ಅವರ ಪರವಾನಿಗೆ ಬ್ಲಾಕ್ಲಿಸ್ಟ್ ಮಾಡಲು ಶರಣಪ್ಪ ಬಿ. ವಸ್ತಾರಿ ಒತ್ತಾಯಿಸಿದ್ದಾರೆ. ಸಾಥಖೇಡ ಈರಣ್ಣ ಮುತ್ಯಾನವರ ದರ್ಶನಕ್ಕೆ ಬರುವ ಭಕ್ತರೂ ಸಂಕಷ್ಟ ಅನುಭವಿಸುವಂತಾಗಿದ್ದು,. ರಸ್ತೆ ಪುನರ್ನಿರ್ಮಾಣಕ್ಕೆ ಶಾಸಕರು ಮತ್ತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕ