ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದಲ್ಲಿ ಹುತಾತ್ಮರಾಗಿದ್ದ ವೀರಯೋಧ ಚಂದ್ರು ಡವಗಿ ಅವರ ಪುತ್ಥಳಿಗೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪುತ್ಥಳಿಗೆ ಭೇಟಿ ನೀಡಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂಧರ್ಭದಲ್ಲಿ ಹುತಾತ್ಮ ಯೋಧ ಚಂದ್ರು ಢವಗಿಯವರ ಕುಟುಂಬದ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿಯವರು ಹುತಾತ್ಮ ಯೋಧ ಚಂದ್ರು ಢವಗಿಯವರು ಜೀವದ ಹಂಗು ತೊರೆದು ದೇಶದ ರಕ್ಷಣೆಗೆ ವಹಿಸಿದ ಹೋರಾಟದ ಜೀವನವನ್ನು ಸ್ಮರಿಸಿದರು