ನ್ಯಾಮತಿ: ಚೀಲೂರು ಗ್ರಾಮದ ಖಬರಸ್ಥಾನ ಬಳಿಯ ತುಂಗಭದ್ರಾ ನದಿಯಲ್ಲಿ 6 ಮರಿಗಳೊಂದಿಗೆ ಮೊಸಳೆ ಪ್ರತ್ಯಕ್ಷ
ಹರಿಯುತ್ತಿರುವ ತುಂಗಾಭದ್ರಾ ನದಿಯಲ್ಲಿ ಮೊಸಳೆಯೊಂದು ಆರು ಮರಿಗಳೊಂದಿಗೆ ಮರಳಿನಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಖಬರಸ್ಥಾನದ ಬಳಿ ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಮೀನಿಗೆ ನೀರು ಹಾಯಿಸಲು ನದಿಯಲ್ಲಿ ರೈತರು ಮೋಟಾರ್ ಅಳವಡಿಸಿದ್ದು, ಮೊಸಳೆಯು ಮರಿಗಳೊಂದಿಗೆ ಮಲಗಿರುವುದು ಕಂಡು ಬಂದಿದೆ. ಹಾಗಾಗಿ, ಫೋನ್ ಕರೆ ಮಾಡಿ ಅಕ್ಕಪಕ್ಕದ ಗ್ರಾಮದವರಿಗೆ ನದಿ ದಾಟುವಾಗ ಎಚ್ಚರ ವಹಿಸುವಂತೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷವೂ ಮೊಸಳೆ ಕಂಡು ಬಂದಿದ್ದು, ಇದೇ ಜಾಗದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಭಯ ಹೆಚ್ಚಾಗುವಂತೆ ಮಾಡಿದೆ.