ಹಾಸನ :ಜಿಲ್ಲೆಯ ಚನ್ನರಾಯಪಟ್ಟಣ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿ ಸಚಿವ ರಾಜಣ್ಣ, ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಪ್ರತಿ ವರ್ಷ ಕಡ್ಡಾಯವಾಗಿ ಹೃದಯ ತಪಾಸಣೆ ಮಾಡಿಸಲು ಸರ್ಕಾರದಲ್ಲಿ ಚಿಂತನೆ ನಡೆದಿದೆ. ಚಿಕ್ಕ ಚಿಕ್ಕ ವಯಸ್ಸಿನವರು ಅಸುನೀಗಿದ್ದಾರೆ. ಅದು ಬೇಸರದ ಸಂಗತಿ. ಮುಂದೆ ಸಾವುಗಳು ಆಗಬಾರದು. ಅದನ್ನು ತಡೆಯಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಕೋವಿಡ್ ಲಸಿಕೆಯಿಂದಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆಹಾರ ಪದ್ಧತಿ, ಹೆಚ್ಚು ಆಯಾಸದಿಂದ ಹೃದಯಾಘಾತ ಸಂಭವಿಸುತ್ತೆ. ಜನಸಂಖ್ಯೆ ಹೆಚ್ಚಿದೆ, ಮೊದಲೂ ಹೃದಯಾಘಾತದಿಂದ ಸಾಯುತ್ತಿದ್ದರು.