ಕಲಬುರಗಿ : ಗಂಡೋರಿ ನಾಲ ಯೋಜನೆ ಮೂಲಕ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕಂದಗೋಳ ಕ್ರಾಸ್ ಬಳಿ ಕರ್ನಾಟಕ ಪ್ರಾಂತ ರೈತ ಸಂಘ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.. ಜನವರಿ 14 ರಂದು ಬೆಳಗ್ಗೆ 10.30 ಕ್ಕೆ ಕುಂದಗೋಳ ಕ್ರಾಸ್ ಬಳಿ ಪ್ರತಿಭಟನೆ ನಡೆಸಿದ ರೈತರು, ಗಂಡೋರಿ ನಾಲಾದಿಂದ ನೀರು ಬಿಡಲಾಗುವ ಕಾಲುವೆಗಳು ಸಂಪೂರ್ಣ ಹುಳು ತುಂಬಿ ಗಿಡಗಂಟಿಗಳಿಂದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ.. ತಕ್ಷಣ ಕಾಲುವೆಗಳ ರಿಪೇರಿ ಮಾಡುವುದರ ಜೊತೆಗೆ ರೈತರ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ