ಯಡ್ರಾಮಿ: ಹಾವು ಕಡಿದು ಕುರಿಗಾಯಿ ಸಾವು: ಕುರಿಗಳು ಮಾತ್ರ ಮನೆಗೆ ವಾಪಸ್ಸಾದಾಗ ಗಾಬರಿಯಾದ ಕುಟುಂಬ, ಯತ್ನಾಳದಲ್ಲಿ ಘಟನೆ
ಯಡ್ರಾಮಿ ತಾಲೂಕಿನ ಯತ್ನಾಳ ಗ್ರಾಮದ 36 ವರ್ಷದ ವ್ಯಕ್ತಿ ಮಾಹಾಂತಪ್ಪ ತಂದೆ ಯಲ್ಲಪ್ಪ ಎಂಬ ಕುರಿಗಾಯಿ ಹಾವು ಕಡಿದು ಸಾವನಪ್ಪಿದ ಘಟನೆ ನಡೆದಿದೆ. ದೈನಂದಿನಂತೆ ಬೆಳಗ್ಗೆ ಕುರಿ ಮೇಯಿಸಲು ಹೋಗಿದ್ದರು. ಆದ್ರೆ ಸಾಯಂಕಾಲ 6.30ರ ಸುಮಾರಿಗೆ ಕುರಿಗಳು ಮಾತ್ರ ಮನೆಗೆ ಬಂದ ಮೇಲೆ ಗಾಭರಿಯಾದ ಮನೆಯವರು ಮತ್ತು ಗ್ರಾಮಸ್ಥರು ಹುಡುಕಿದಾಗ ಹಾವು ಕಡಿಸಿಕೊಂಡು ಒದ್ದಾಡುತ್ತಿರುವದು ಕಂಡಿಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಎಂದು ಭಾನುವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ...