ಚಳ್ಳಕೆರೆ: ಚಳ್ಳಕೆರೆ ಪೊಲೀಸರ ಕಾರ್ಯಾಚರಣೆ, ಬೈಕ್ ಕಳ್ಳನ ಬಂಧನ
ಚಳ್ಳಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಬೈಕ್ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕಳೆದ 04 ತಿಂಗಳಿಂದ ಚಳ್ಳಕೆರೆ ನಗರದ ವಿವಿದ ಕಡೆಗಳಲ್ಲಿ,, ಮೋಟಾರ್ ಸೈಕಲ್ ಮತ್ತು ಕಾರು ಕಳ್ಳತನವಾಗುತ್ತಿರುವ ಬಗ್ಗೆ, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಧಾಖಲಾಗಿತ್ತು. ಈ ಬಗ್ಗೆ, ಎಸ್ಪಿ ರಂಜಿತ್ ಕುಮಾರ್ ಭಂಡಾರು, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಆರ್ ರವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ಆರೋಪಿಯನ್ನ ಪತ್ತೆ ಮಾಡಿದ್ದಾರೆ.