ಹಣಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡಿದ ಗುಜರಾತ್ ಮೂಲದ ಆರೋಪಿ ಮೋಹಿತನನ್ನು ರಾಯಚೂರಿನ ಸೈಬರ್ ಅಪರಾಧ ಠಾಣೆ(ಸೆನ್ ) ಪೊಲೀಸರು ಬಂಧಿಸಿ, ಆರೋಪಿಯಿಂದ 3.50 ರೂ.ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು 2024ರ ಡಿ.17ರಿಂದ 2025ರ ಜ.21ರ ವರೆಗೆ ಅವಧಿಯಲ್ಲಿ ಮೆಹಬೂಬ ರೆಹಮಾನ್ ಹಾಗೂ ಅವರ ಸ್ನೇಹಿತ ರಾಜಶೇಖರ ಅವರಿಗೆ ವಾಟ್ಸ್ಆ್ಯಪ್ನಲ್ಲಿ ಸಂಪರ್ಕ ಮಾಡಿ ವ್ಯಾಪಾರದಲ್ಲಿ ಹಣ ತೊಡಗಿಸುವಂತೆ ಹೇಳಿದ್ದರು. ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಿಂದ 28,06,182 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದ.