ಚಳ್ಳಕೆರೆ:-ತಾಲೂಕಿನ ಚೌಳೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ನಡೆಯಿತು. ಹಬ್ಬದ ಹಿನ್ನೆಯಲ್ಲಿ ಕಳೆದೆರೆಡು ದಿನಗಳಿಂದ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನಡೆದವು.ಭಾನುವಾರ ಸಂಜೆ 7ಗಂಟೆಗೆ ವಿಶೇಷ ಪೂಜೆ ನಡೆದವು. ಈ ಸಂದರ್ಭದಲ್ಲಿ ಶಾಸಕ ರಘುಮೂರ್ತಿ ಭಾಗವಹಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಬಸವರಾಜ್, ಮುಖಂಡರಾದ ವೀರೇಶ್, ದೇವಣ್ಣ, ವೀರಣ್ಣ, ಚನ್ನಕೇಶವ ಇದ್ದರು.