ಕೊಳ್ಳೇಗಾಲ: ಆನೆದಂತ ಸಂಗ್ರಹಿಸಿ ಮಾರಾಟಕ್ಕೆ ಯತ್ನ; ಬಿಆರ್ ಟಿ ಕೊಳ್ಳೇಗಾಲ ವಲಯ ಅಧಿಕಾರಿಗಳಿಂದ ನಾಲ್ವರ ಬಂಧನ
ಆನೆ ದಂತ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಬಿಆರ್ ಟಿ ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ವಿನ್ಸನ್, ಟಿ.ನರಸೀಪುರ ಕಲಿಯೂರು ಗ್ರಾಮದ ವಸಂತ್ ಕುಮಾರ್, ಮಾಂಬಳ್ಳಿ ಗ್ರಾಮದ ಚೇತನ್ ಕುಮಾರ್, ಮೈಸೂರಿನ ನಿತಿನ್ ಕುಮಾರ್ ಬಂಧಿತ ಆರೋಪಿಗಳು. ವಸಂತ್ ಕುಮಾರ್ ಮನೆಯಲ್ಲಿದ್ದ ಆನೆ ದಂತವನ್ನು ಇವರು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವನ್ಯಜೀವಿ ವಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ ಎರಡು ಆನೆ ದಂತಗಳು, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.