ಬಂಗಾರಪೇಟೆ: ಇ-ಖಾತೆಗಳ ಅಕ್ರಮವಾಗಿ ಮಾಡಿರುವುದನ್ನು ರದ್ದು ಮಾಡಲು ಕರ್ನಾಟಕ ದಲಿತ ರೈತಸೇನೆ ಒತ್ತಾಯ
ಇ-ಖಾತೆಗಳ ಅಕ್ರಮವಾಗಿ ಮಾಡಿರುವುದನ್ನು ರದ್ದು ಮಾಡಲು ಕರ್ನಾಟಕ ದಲಿತ ರೈತಸೇನೆ ಒತ್ತಾಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಸರ್ವೆನಂ.೨೬ರ ೩೬ ಎಕರೆ ೧೧ ಗುಂಟೆ ಹುಲ್ಲುಬನ್ನಿ ಖರಾಬು ಜಮೀನಿನ ವಿಸ್ತೀರ್ಣದ ಪೈಕಿ ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ, ತಹಸೀಲ್ದಾರರ ದುರಸ್ತಿ, ನೀಲಿ ನಕ್ಷೆ ಇಲ್ಲದೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಂಚಾಯಿತಿಯಲ್ಲಿ ಅನಧಿಕೃತವಾಗಿ ಇ-ಖಾತೆಗಳನ್ನು ಅಕ್ರಮವಾಗಿ ಮಾಡಿರುವುದನ್ನು ರದ್ದು ಮಾಡಲು ಕರ್ನಾಟಕ ದಲಿತ ರೈತಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲಿ ಮಂಗಳವಾರ ಆಗ್ರಹಿಸಿದರು.