ಚಿತ್ರದುರ್ಗ: ಚಿತ್ರದುರ್ಗ ಡಿಎಆರ್ ಮೈದಾನದಲ್ಲಿ ರಕ್ತದಾನ ಶಿಬಿರ
ನಾಗರೀಕ ಬಂದೂಕು ತರಬೇತಿಯ 75ನೇ ಬ್ಯಾಚ್ ನ ವತಿಯಿಂದ ಗುರುವಾರ ಬೆಳಿಗ್ಗೆ 11 ಗಂಟೆಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಅಯೋಜನೆ ಮಾಡಲಾಗಿತ್ತು. ಚಿತ್ರದುರ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಸುಮಾರು 75 ಮಂದಿ ಶಿಬಿರಾರ್ಥಿಗಳು ರಕ್ತಧಾನ ಮಾಡಿದರು. ಚಿತ್ರದುರ್ಗ ಜಿಲ್ಲಾ ಪೊಲೀಸ್,ಭಾರತೀಯ ರೆಡ್ ಕ್ರಾಸ್, JSW ರವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ರಕ್ತ ದಾನ ಮಾಡಿದವರಿಗೆ ಸ್ಥಳದಲ್ಲೇ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. SP ರಂಜಿತ್ ಕುಮಾರ್ ಬಂಡಾರೂ, ASP ಶಿವಕುಮಾರ್, DYSP ದಿನಕರ್ ಸೇರಿ ಹಲವರು ಭಾಗಿಯಾಗಿದ್ದರು