ಮಾನ್ವಿ: ರಾಯಚೂರು : ಮಟಕಾ ನಂಬರ್ ಬರೆಯುತ್ತಿದ್ದ ಆರೋಪಿ ಬಂಧನ
Manvi, Raichur | Oct 19, 2025 ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುರಾನಪೂರು ಗ್ರಾಮದ ಹಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ್ ಬರೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇಳೆ ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ 2 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿತನು 1 ರೂ.ಗೆ 80 ರೂ. ಕೊಡುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಸ್ಥಳದಲ್ಲಿದ್ದ ಆರೋಪಿತನಿಂದ ರೂ.1550 ನಗದು, ಮಟಕಾ ಚೀಟಿ ಪೊಲೀಸರು ಜಪ್ತಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.