ರೈತನ ಮೇಲೆ ಶೂಟ್ ಮಾಡಿದ ಪ್ರಕರಣ,ಇಂದು ಮಂಚೇನಹಳ್ಳಿ ಬಂದ್ ಯಶಸ್ವಿ
Manchenahalli, Chikkaballapur | Apr 28, 2025
ರೈತನ ಮೇಲೆ ಶೂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚೇನಹಳ್ಳಿ ಗ್ರಾಮದ ರೈತರು ಇಂದು ಮಂಚೇನಹಳ್ಳಿ ಬಂದ್ ಘೋಷಣೆ ಮಾಡಿದ್ದು ಅದರಂತೆ ನೂರಾರು ಸಂಖ್ಯೆಯಲ್ಲಿ ಬಂದ್ ಮಾಡಿ ಮಂಚೇನಹಳ್ಳಿ ಬಂದ್ ಯಶಸ್ವಿಗೊಳಿಸಿದರು. ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ಬಂದ್ ಘೋಷಣೆ ಮಾಡಿದ್ರು ಅದರಂತೆ ನೂರಾರು ಸಂಖ್ಯೆಯಲ್ಲಿ ರೈತಪರ ಸಂಘಟನೆಗಳು ಗ್ರಾಮಸ್ಥರು ಸೇರಿ ರೈತ ಮೇಲೆ ದಾಳಿ ಮಾಡಿರುವವರ ವಿರುದ್ದ ರೌಡಿಶೀಟರ್ ಕೇಸ್ ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯ ಮಾಡಿದ್ರು.ಒಟ್ಟಾರೇ ಇಂದು ಮಂಚೇನಹಳ್ಳಿ ಬಂದ್ ಯಶಸ್ವಿಯಾಗಿದೆ.