ಶಿವಮೊಗ್ಗ ತಾಲೂಕು ಲಿಂಗಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ವಿಮಾನಯಾನ ಪ್ರಯಾಣ ಮಾಡಿ ಅಲ್ಲಿ ಹಾಲು ಸ್ಥಳಗಳನ್ನ ವೀಕ್ಷಿಸಿ ವಿಶೇಷ ಅನುಭವ ಪಡೆದು ಸಂಭ್ರಮಿಸಿದ್ದಾರೆ.ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದ್ದು,ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳು ಸಾಮಾನ್ಯವಾಗಿ ಬಸ್ಸು ಅಥವಾ ಟೆಂಪೋ ಟ್ರಾವೆಲ್ ಮೂಲಕ ಪ್ರವಾಸ ಮಾಡೋದು ಸಾಮಾನ್ಯ. ಆದರೆ ಲಿಂಗಾಪುರ ಶಾಲೆಯ ಮಕ್ಕಳು ಮೊದಲ ಬಾರಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ನಡೆಸಿ ಬಂದಿರುವುದು ವಿಶೇಷವಾಗಿದೆ ಈ ಕುರಿತು ಮಕ್ಕಳು ಸಂತಸ ಹಂಚಿಕೊಂಡಿದ್ದಾರೆ.