ಕಾವೇರಿ ನದಿಗೆ ಈಜಲು ತೆರಳಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಕೊಪ್ಪಲು ಗ್ರಾಮದಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಸಗೀರ್ ಹುಸೇನ್ (28) ನೀರಿನಲ್ಲಿ ಕಾಣೆಯಾದವದರು. ಮಂಡ್ಯ ಕೊಪ್ಪಲಿನ ಕಾವೇರಿ ಬೋರೆ ದೇವರ ದೇವಸ್ಥಾನದ ಬಳಿಯಿರುವ ಕಾವೇರಿ ನದಿಗೆ ಈಜು ಹೊಡೆಯಲು ಮೂವರು ತೆರಳಿದ್ದಾರೆ. ಈಜು ಹೊಡೆದು ದಡಕ್ಕೆ ಬಂದ ಸಗೀರ್ ಹುಸೇನ್ ಇನ್ನೊಮ್ಮೆ ಈಜು ಹೊಡೆಯುವುದಾಗಿ ನದಿಗೆ ತೆರಳಿ ಸುಮಾರು ಹೊತ್ತಿನ ಬಳಿಕವಾದರೂ ವಾಪಸು ದಡಕ್ಕೆ ಬಾರದೇ ಇದ್ದಾಗ ಸ್ನೇಹಿತರು ಹುಡುಕಾಡಿದ್ದಾರೆ. ಬಳಿಕ ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಈಜುಗಾರರು ಶವಕ್ಕಾಗಿ ತಡಕಾಟ ನಡೆಸಿದ್ದು, ಈವರೆಗೂ ಪತ್ತೆಯಾಗಿಲ್ಲ ಎಂದು ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.