ಬೆಂಗಳೂರು ವಿವಿ ವಿದ್ಯಾರ್ಥಿನಿಯರಿಗೆ ಅಟ್ಯಾಕ್ ಮಾಡಿರುವಂತಹ ಶ್ವಾನಗಳನ್ನ ಈಗ ಸೆರೆ ಹಿಡಿಯಲಾಗಿದೆ ಕಳೆದ ಕೆಲ ದಿನಗಳಿಂದ ಬೆಂಗಳೂರು ವಿವಿ ವಿದ್ಯಾರ್ಥಿಗಳು ಡಾಗ್ ಅಟ್ಯಾಕ್ ಇಂದ ಭಯಬೀತರಾಗಿದ್ದರು. ಆದಷ್ಟು 13ರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಶ್ವಾನಗಳ ಸೆರೆಹಿಡಿಯಲಾಗಿದ್ದು ಅವುಗಳನ್ನು ಈಗ ನಿಗಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಸದ್ಯ ನಾಯಿ ಸೆರೆ ಹಿಡಿದಿರುವುದರಿಂದ ವಿದ್ಯಾರ್ಥಿನಿಯರು ನಿಟ್ಟುಸಿರು ಬಿಟ್ಟಿದ್ದಾರೆ