ಕರವೇ ಸ್ವಾಭಿಮಾನ ಸೇನೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಲಕ್ಷಣ ಭೋವಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ, ಬಿ ಅವರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲಿಂಗಸೂಗೂರು ತಾಲೂಕ ಅಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾಗಿ ಜಿಲಾನಿ ಪಾಷಾ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರಾಗಿ ಶಶಿಕಲಾ ಭೀಮರಾಯ, ಸಿಂಧನೂರು ತಾಲೂಕು ಗೌರವ ಅಧ್ಯಕ್ಷರಾಗಿ ಶೇಖರಪ್ಪ ಹಾಗೂ ಸಿಂಧನೂರು ಸಂಘಟನಾ ಕಾರ್ಯದರ್ಶಿ ಶಂಕರ ಬ್ಯಾಡಗಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಕ್ಷಣವೇ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಿದರು