ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಮಂಗಳವಾರ 1 ಗಂಟೆ ಸುಮಾರಿಗೆ ಘಟನೆ ಜರುದೆ ಎಂಬ ಮಾಹಿತಿ ಬಲಭ್ಯವಾಗಿದೆ. ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿದೆ. ಅಂಜುಳ ಗ್ರಾಮದಿಂದ ದೇವದುರ್ಗಕ್ಕೆ ವಾಪಾಸ್ಸಾಗುವಾಗ ಘಟನೆ ಜರುಗಿದೆ. ಜಮೀನಿನಲ್ಲಿ ಕೆಲಸ ಮಾಡುವ ರೈತರಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದ್ದು, ಸಲಾಕೆಗಳಿಂದ ಬಸ್ ನ ಗಾಜು ಒಡೆದು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಬಸ್ಸಿನ ಕಂಡಕ್ಟರ್ ಗಂಭೀರ ಗಾಯವಾಗಿದ್ದು, ರಾಯಚೂರಿನ ರಿಮ್ಸ್ ಗೆ ರವಾನಿಸಲಾಗಿದೆ.