ಸಿಂಧನೂರು: ಸಿಂಧನೂರಿನಿಂದ ಬೆಂಗಳೂರಿಗೆ ಮತ್ತೊಂದು ನೂತನ ರೈಲು ಸೇವೆ ಘೋಷಣೆ
ರಾಯಚೂರು ಜಿಲ್ಲೆಯ ಸಿಂಧನೂರು ನಗರದಿಂದ ಬೆಂಗಳೂರು ಮಹಾನಗರಕ್ಕೆ ರೈಲ್ವೆ ಇಲಾಖೆ ಮತ್ತೊಂದು ರೈಲು ಘೋಷಣೆ ಮಾಡಿದೆ. ಆದರೆ ಒಂದು ರೈಲು ಮಾರ್ಗ ಬೇಗವಾಗಿ ರೈಲು ಬೆಂಗಳೂರು ತಲುಪುವಂತೆ ಇರಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ ಈಗಾಗಲೇ ಇರುವಂತಹ ರೈಲು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಬೆಂಗಳೂರಿಗೆ ಹೋಗುತ್ತಿದ್ದು ದೂರದ ಪ್ರಯಾಣ ಅನಿಸುತ್ತಿದೆ ಹಾಗಾಗಿ ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ತಲುಪಿದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಹೊತ್ತಾಯ ಸಿಂಧನೂರು ನಗರವಾಸಿಗಳದ್ದಾಗಿದೆ.