ಪಾವಗಡ: ಪಟ್ಟಣದಲ್ಲಿ ಮೊಹರಂ ಸಂಭ್ರಮ, ಬಾಬಯ್ಯನಗುಡಿಯ ಅಗ್ನಿಕುಂಡದ ಸುತ್ತ ತಮಟೆ ಸದ್ದಿಗೆ ಭಕ್ತರ ಹೆಜ್ಜೆ
ಪಾವಗಡ: ಪಟ್ಟಣದ ಬಾಬಯ್ಯನಗುಡಿ ಬೀದಿ ಸೇರಿದಂತೆ ಹಲವು ಭಾಗಗಳಲ್ಲಿ ಶನಿವಾರ ಸಂಜೆ 7 ಗಂಟೆಯಲ್ಲಿ ಮೊಹರಂ ಪ್ರಯುಕ್ತ ಅಗ್ನಿಕುಂಡ ಆಚರಣೆ ವಿಜೃಂಭಣೆಯಿಂದ ನಡೆಯಿತು. ಕಟ್ಟಿಗೆಯ ರಾಶಿಗಳನ್ನು ಕೆಂಡಮಾಡಿ ಭಕ್ತಿ ಸಮರ್ಪಿಸಿದರು. ಅಂಬೇಡ್ಕರ್ ನಗರ ಹಾಗೂ ಆದರ್ಶನಗರದಿಂದ ಮೆರವಣಿಗೆಯಲ್ಲಿ ಮಡಿಕೆಯಲ್ಲಿ ತಂದ ಪಾನಕವನ್ನು ಬಾಬಯ್ಯರ ಮುಂದೆ ಸಮರ್ಪಿಸಿ, ನಂತರ ಅದನ್ನು ನೂರಾರು ಭಕ್ತರಿಗೆ ವಿತರಿಸಲಾಯಿತು. ದೇಗುಲದಲ್ಲಿ ಭಕ್ತಾದಿಗಳು ಕಡ್ಲೆ ಹಾಗೂ ಸಕ್ಕರೆ ನೈವೇದ್ಯವನ್ನು ಮಾಡಿಸಿ ಎಲ್ಲರೊಂದಿಗೆ ಹಂಚಿಕೊಂಡರು. ತಮಟೆ ಸದ್ದಿಗೆ ಭಕ್ತರು ಹೆಜ್ಜೆ ಹಾಕಿದ ದೃಶ್ಯಗಳು ಕಣ್ತುಂಬಿಸಿಕೊಂಡಿದ್ದು ಸಹಸ್ರಾರು ಭಕ್ತರು ಭಾಗವಹಿಸಿದ್ದ ಈ ಆಚರಣೆಯಲ್ಲಿ ಧಾರ್ಮಿಕ ಉತ್ಸಾಹ, ಶ್ರದ್ಧೆ ಮತ್ತು ಪರಸ್ಪರ ಸೌಹಾರ್ದತೆಯ ಮನೋಭಾವನೆ