ಕೊಪ್ಪಳ: ಅಳವಂಡಿ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ,ರಸ್ತೆ ಅಭಿವೃದ್ಧಿಗೆ ಚಾಲನೆ
Koppal, Koppal | Apr 19, 2025 ಇಂದು ಕೊಪ್ಪಳ ಮತಕ್ಷೇತ್ರದ ಅಳವಂಡಿ ಗ್ರಾಮದಲ್ಲಿ 1.80 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಾಥಮಿಕ ಅರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಏಪ್ರಿಲ್ 19 ರಂದು ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾಯನಾಡಿ 1.52 ಕೋಟಿ ವೆಚ್ಚದಲ್ಲಿ ಅಳವಂಡಿ ಯಿಂದ ನಿಲೋಗಿಪುರ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಡಿಗಲ್ಲು ಮತ್ತು 3 ಕೋಟಿ ವೆಚ್ಚದಲ್ಲಿ ಅಳವಂಡಿಯಲ್ಲಿ ಪ್ರವಾಸಿ ಮಂದಿರದ ಅಡಿಗಲ್ಲು ನೆರವೇರಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧ್ಯಕ್ಷ ರು ಸದಸ್ಯರು ಉಪಸ್ಥಿತರಿದ್ದರ