ಇಳಕಲ್: ಹೃದಯಘಾತದಿಂದ ನಗರದ ಯುವ ವೈದ್ಯೆ ಡಾ.ಪ್ರಜ್ಞಾ ಪ್ರಹ್ಲಾದರಾವ್ ಕುಲಕರ್ಣಿ ನಿಧನ
Ilkal, Bagalkot | Oct 24, 2025 ಬಾಗಲಕೋಟ ಜಿಲ್ಲೆಯ ಇಳಕಲ್ಲದ ವಿಜಯನಗರ ಬಡಾವಣೆ ನಿವಾಸಿ ಯುವ ವೈದ್ಯೆ ಡಾ.ಪ್ರಜ್ಞಾ ಪ್ರಹ್ಲಾದರಾವ್ ಕುಲಕರ್ಣಿ (೨೪) ಲೋ-ಬಿಪಿ ಮತ್ತು ಹೃದಯಾಘಾತದಿಂದ ಶುಕ್ರವಾರದಂದು ನಿಧನರಾದರು. ಮೃತಳಿಗೆ ತಂದೆ, ತಾಯಿ ಮತ್ತು ಅಪಾರ ಬಂಧು ಬಳಗ ಇದೆ. ಇನ್ನೂ ಬಾಳಿ ಬದುಕಿ ಬೆಳಗಬೇಕಿದ್ದ ಪ್ರಜ್ಞಾ ಇವಳ ಅಕಾಲಿಕ ಸಾವಿಗೆ ವಿಜಯನಗರ ಬಡಾವಣೆ ಕಂಬನಿ ಮಿಡಿದಿದೆ.