ಆನೇಕಲ್: ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ನಕಲಿ ತಲ್ವಾರ್ ಹಿಡಿದು ಡ್ಯಾನ್ಸ್, ಮಡಿವಾಳದಲ್ಲಿ ಘಟನೆ
ಸಿನಿಮಾ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ತಲ್ವಾರ್ ಹಿಡಿದು ಕುಣಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ OG ಸಿನೆಮಾ ಪ್ರದರ್ಶನದ ಸಂದರ್ಭದಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಘಟನೆ ನಡೆದಿದ್ದು, ತಲ್ವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಸಿನಿಮಾದಲ್ಲಿ ನಾಯಕ ಪವನ್ ಕಲ್ಯಾಣ್ ತಲ್ವಾರ್ ಹಿಡಿದಿರುವ ದೃಶ್ಯಗಳಿವೆ. ಅದೇ ರೀತಿ ಕೆಲ ಆರೋಪಿಗಳು ಪ್ಲ್ಯಾಸ್ಟಿಕ್ ತಲ್ವಾರ್ ಪ್ರದರ್ಶಿಸಿದ್ದು, ಕಟೌಟ್ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಕೃತ್ಯ ಎಸಗಿರುವುದು ಬಯಲಾಗಿದೆ.ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಮಡಿವಾಳ ಪೊಲೀಸರು ಪ್ಲ್ಯಾಸ್ಟಿಕ್ ತಲ್ವಾರ್‌ಗಳನ್ನ ವಶಕ್ಕೆ ಪಡೆದಿದ್ದಾರೆ.