ಚಳ್ಳಕೆರೆಯ ತ್ಯಾಗರಾಜ ನಗರದ ವಾರಸುದಾರರಿಲ್ಲದ ಮನೆಯೊಂದರಲ್ಲಿ ಬೆಂಕಿ ಬಿದ್ದ ಘಟನೆ ನಡೆದಿದೆ. ತ್ಯಾಗರಾಜ ನಗರದ ನಿವೃತ್ತ ಹಾಗೂ ದಿವಂಗತ ಪೌರಾಯುಕ್ತ ತಿಪ್ಪಯ್ಯ ಇವರಿಗೆ ಸೇರಿದ ವಾಸವಿಲ್ಲದ ಮನೆ ಒಳಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ದಟ್ಟವಾದ ಹೊಗೆ ಬರುತ್ತಿದ್ದನ್ನ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕದಳದ ಸಿಬ್ಬಂಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.