ಪಟ್ಟಣದ ಇತಿಹಾಸ ಪ್ರಸಿದ್ಧ ಪಾಂಡುರಂಗ ರುಕ್ಮಿಣಿ ದೇವಸ್ಥಾನಕ್ಕೆ ಅಗತ್ಯ ನೆರವು ನೀಡಲು ಸದಾ ಸಿದ್ಧವಿರುವುದಾಗಿ ಶಾಸಕ ಡಾ. ಸಿದ್ದು ಪಾಟೀಲ ತಿಳಿಸಿದರು. ಆಶಾಡ ಏಕಾದಶಿ ಹಿನ್ನೆಲೆಯಲ್ಲಿ ಹುಮ್ನಾಬಾದ್ ಪಟ್ಟಣದಲ್ಲಿನ ಪಾಂಡುರಂಗ ರುಕ್ಮಿಣಿ ದೇವಸ್ಥಾನಕ್ಕೆ ಭಾನುವಾರ ಬೆಳಿಗ್ಗೆ 11:30 ಕ್ಕೆ ಭೇಟಿ ನೀಡಿ ದರ್ಶನ ಆಶೀರ್ವಾದವನ್ನು ಪಡೆದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸುಧಾಕರ ಕುಲಕರ್ಣಿ ಅವರು ಇಟ್ಟ ಬೇಡಿಕೆಗೆ ಸ್ಪಂದಿಸಿ ಅವರು ಈ ಭರವಸೆ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಮಲ್ಲಿಕಾರ್ಜುನ್ ಸೀಗಿ ಮುಖಂಡರಾದ ಬಸವರಾಜ ಗಿರಮಲ್, ಸಂತೋಷ ಪಾಟೀಲ, ಸೋಮಶೇಖರ ಸೀಗಿ, ಕಂಟೆಪ್ಪಾ ಹಲಮ ಡಗಿ ಮತ್ತಿತರರು ಹಾಜರಿದ್ದರು